ಇದು ಡ್ರೈಸ್ ರ ಸೈಟ್ಕೋರ್ ಸುಳ್ಳುಸುದ್ದಿ ಹಬ್ಬಿಸುವುದರ ಬಗ್ಗೆ ಬರೆದ ಲೇಖನದ ಬಗ್ಗೆ ನನ್ನ ಅಭಿಪ್ರಾಯ.
ದ್ರುಪಾಲ್ (Drupal) ಒಂದು ವೆಬ್-ಸೈಟ್ ಗಳನ್ನು ಕಟ್ಟುವ ತಂತ್ರಜ್ಞಾನ. ಇದನ್ನು ಡ್ರೈಸ್ ರ ನೇತ್ರತ್ವದಲ್ಲಿ ಓಪನ್ ಸೋರ್ಸ್ ಸಮುದಾಯ ವೃದ್ಧಿಪಡಿಸುತ್ತಿದೆ. ಓಪನ್ ಸೋರ್ಸ್ ಆದಕಾರಣ ಯರೂ ಅದನ್ನು ಯಾವುದೇ ತರಃದ ನಿರ್ಭಂದವಿಲ್ಲದೆ, ಯಾವುದೇ ತರಹದ ಪರವಾನಿಗೆ(license) ಇಲ್ಲದೆ ಉಪಯೋಗಿಸಬಹುದು. ಅಮೇರಿಕಾದ ಸರಕಾರಿ ವೆಬ್-ಸೈಟ್ ಕೂಡ ದ್ರುಪಾಲ್ ಅನ್ನು ಉಪಯೋಗಿಸುತ್ತದೆ.
ಇದು ಸೈಟ್ಕೋರ್ (Sitecore) ಗೆ ನುಂಗಲಾಗದ ಸಂಗತಿಯಾದಂತಿದೆ. ಎಲ್ಲ ಸಂಸ್ಥೆಗಳು ದ್ರುಪಾಲ್ ಅಥವ ವರ್ಡ್-ಪ್ರೆಸ್ಸ್(WordPress) ನಂತಃ ಓಪನ್-ಸೋರ್ಸ್ ತಂತ್ರಜ್ಞಾನಗಳನ್ನು ಉಪಯೋಗಿಸಿದರೆ ಪರವಾನಿಗೆ ಶುಲ್ಕದಿಂದ ಬರುವ ಆದಾಯದ ಮೇಲೆ ಪರಿಣಾಮವೇನೆಂದು ಯೋಚಿಸುತ್ತಿದ್ದಾರೆ. ಹೀಗೆ ಯೋಚಿಸುವುದರಲ್ಲಿ ತಪ್ಪೇನಿಲ್ಲ. ಆದರೆ ತಮ್ಮ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡುವುದರ ಬದಲು ದ್ರುಪಾಲ್/ವರ್ಡ್-ಪ್ರೆಸ್ಸ್ ಗಳ ಮೇಲೆ ಸುಳ್ಳು ಸುದ್ದಿ ಹರಡಿಸುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ.
ಇಂತಃ ಕೃತ್ಯ ಹೊಸತೇನಲ್ಲ. ಮೈಕ್ರೋಸೊಫ್ಟ್ ಕೂಡ ಹಲವು ಬಾರಿ ಈ ತರಃ ಮಾಡಿದೆ.
ದಿನ ಕಳ್ತೆದಂತೆ ಈ ಸಂಸ್ಥೆಗಳಿಗೆ ಓಪನ್ ಸೋರ್ಸ್ ಸಮುದಾಯ ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಮೀರಿಸುವುದು ಕಷ್ಟವಾಗುತ್ತಿದೆ. ಯಾಕೆಂದರೆ ಇವರ ಬಳಿ ಎಷ್ಟೇ ಹಣವಿದ್ದರೂ, ಒಂದು ಸಮುದಾಯದ ಶ್ರಮವನ್ನು ಮೀರಲಾಗುವುದಿಲ್ಲ. ಈ ಸಂಸ್ಥೆಗಳ ತಂತ್ರಜ್ಞಾನವನ್ನು ಉಪಯೋಗಿಸುವವರು ಬೇರೆಯವರು. ಸಮುದಾಯವು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಆ ಸಮುದಾಯವೇ ಉಪಯೋಗಿಸುತ್ತದೆ.
ಸೈಟ್ಕೋರ್ ಹೆದರಿ ಸುಳ್ಳು ಸುದ್ದಿ ಹರಡಿಸುತ್ತಿದೆಯೆನ್ನುವುದರಲ್ಲಿ ಎರಡು ಮಾತಿಲ್ಲ.
ನಿಮ್ಮ ಅಭಿಪ್ರಾಯವೇನು? ಕೆಳಗೆ ತಿಳಿಸಿ.
Add new comment