ಕನ್ನಡ
Thu
21
Jan
2010
ದ್ರುಪಾಲ್ ಮತ್ತು ಕನ್ನಡ
by Vyomaನಿನ್ನೆ ನಾನು ಹೀಗೆ ದ್ರುಪಾಲಲ್ಲಿ ಕನ್ನಡ ಬರೆಯುವುದರ ಬಗ್ಗೆ ಯೋಚಿಸುತ್ತಿರಬೇಕಾದರೆ ಗ್ರಹಣ ಬ್ಲಾಗ್ ನಲ್ಲಿ p6 ಬರೆದ ಎಂಟ್ರಿ ಸಿಕ್ಕಿತು: Help Translate Drupal to Kannada (ದ್ರುಪಾಲನ್ನು ಕನ್ನಡಕ್ಕೆ ಅನುವಾದ ಮಾಡಲು ಸಹಾಯ ಮಾಡಿ)
ದ್ರುಪಾಲ್ ಕೋರ್ ಪ್ರಾಜೆಕ್ಟ್ ನಲ್ಲಿ ೬೦೫೮ ಪದಗಳು ಅನುವಾದ ಮಾಡಲಿಕ್ಕಿದೆ (6058 untranslated words). ಇದರಲ್ಲಿ ಕೆಲವು ಶಬ್ಧಗಳನ್ನು ಈಗಾಗಲೇ ಅನುವಾದ ಮಾಡಿಯಾಗಿದೆ. ಆದರೆ ಇನ್ನೂ ಹಲವು ಶಬ್ದಗಳು ಬಾಕಿಯಗಿವೆ.
Tue
19
Jan
2010
ಚೀನಾ ಮತ್ತು ಗೂಗಲ್
by Vyomaಚೀನಾದಲ್ಲಿ ನಡೆಸುವ ತನ್ನ ವ್ಯವಹಾರದ ಬಗ್ಗೆ ಕಳೆದ ವಾರ ಗೂಗಲ್ ತನ್ನ ಬ್ಲಾಗ್ ನಲ್ಲಿ ಒಂದು ಪ್ರಕಟಣೆ ನೀಡಿತು. ಗೂಗಲ್ ಹಾಗು ಹಲವು ಸಂಸ್ಥೆಗಳ ಮೇಲೆ ಚೀನಾದಿಂದ ಉದ್ಚವಿಸಿದ ಸೈಬರ್ ದಾಳಿ ಮಾಡಲಾಗಿದ್ದು, ಇದು ಚೀನಾದ ಮಾನವ ಹಕ್ಕು ಹೋರಾಟಗಾರರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವೆಂದು ಅದು ವಾದಿಸಿದೆ. ಈ ಕಾರಣದಿಂದ ಅದು ತನ್ನ ಚೀನಾದಲ್ಲಿ ನಡೆಸುವ ವ್ಯವಹಾರ (Google.cn) ಹಾಗು ಸೇವೆಗಳನ್ನು ನಿಲ್ಲಿಸು ಸಂಭವ ಇದೆಯೆಂದು ಹೇಳುತ್ತದೆ.
ಗೂಗಲ್ ತನ್ನ ಚೀನಾ ವ್ಯವಹಾರ ೨೦೦೬ರಲ್ಲಿ ಶುರು ಮಾಡಿತ್ತು. ಅಂದಿನಿಂದ ಇಂದಿನವರೆಗೆ ಅಲ್ಲಿ ವ್ಯವಹಾರ ನಡೆಸಲು, ಅದು ಚೀನಾದ ಕಾನೂನಿನ ಪ್ರಕಾರ ತನ್ನ ಸರ್ಚ್ ಇಂಜಿನ್ ಅನ್ನು ಸೆನ್ಸಾರ್ ಮಾದುತಿತು. ಇದರಿಂದಾಗಿ ಗೂಗಲ್ ಅನ್ನು ಹಲವರು ಟೀಕಿಸುತ್ತಿದ್ದರು. ಈವಾಗ ಗೂಗಲ್ ಚೀನಾದಿಂದ ಇನ್ನು ಹೊರಗೆ ಬರಲ್ಲಿಲ. ಚೀನಾ ಸರಕಾರದೊಂದಿಗೆ ಮಾತುಕಥೆ ನಡೆಸುತ್ತಿದೆ. ಈ ಮಾತುಕತೆಯ ಪರಿಣಾಮ ಇನ್ನು ಒಂದು-ಎರಡು ವಾರದಲ್ಲಿ ತಿಳಿಯಬಹುದು.
Fri
20
Mar
2009
ಭಾರತದ ಅರ್ಥವ್ಯವಸ್ಥೆಯ ಮೇಲೆ ಟಾಟಾ ನ್ಯಾನೋ ಪರಿಣಾಮ?
by Vyomaನನ್ನ ಗೆಳೆಯ ದೀಪಕ್ ರೆಡಿಫ್ ನ ಅಂಕಣ ಕುರಿತು ಬರೆದಿದ್ದಾನೆ - ಟಾಟಾ ನ್ಯಾನೋ ಬಿಡುಗಡೆಯಿಂದಾಗುವ ಪರಿಣಾಮಗಳ ಬಗ್ಗೆ.
ಆ ಅಂಕಣ ಹೇಳುವಂತೆ, ಟಾಟಾ ನ್ಯಾನೋ ಕಾರ್ ಅನ್ನು ಒಂದು ಲಕ್ಷ ರುಪಾಯಿ ಮೌಲ್ಯದಲ್ಲಿ ಮಾರುಕಟ್ಟೆಗೆ ತರುತ್ತಿದೆ.
ಇದರಿಂದಾಗಿ ಭಾರತದಲ್ಲಿ ಮುಂಚೆಗಿಂತ ಬಹಳ ಜನರಿಗೆ ಕಾರೆಂಬುದು ಕೈಗೆಟಕುವ ಸಾಮಾನಾಗುತ್ತದೆ. ದೀಪಕ್ ಹೇಳಿದಂತೆ ಭಾರತದ ಹೆಚ್ಚಿನ ಪಟ್ಟಣಗಳ ರಸ್ತೆ ಸಂಚಾರದ ಮೇಲೆ ಪರಿಣಾಮವಾಗಲಿದೆ. ಆದರೆ, ನನ್ನ ಕುತೂಹಲ ನ್ಯಾನೋ ಆರ್ಥಿಕ ವ್ಯವಸ್ತೆಯ ಮೇಲೆ ಏನು ಪರಿಣಾಮ ಮಾಡುತ್ತದೆಯೆಂದು.
Fri
13
Mar
2009
ಭಾರತದಲ್ಲಿ ಪತ್ರಿಕೋದ್ಯಮ
by Vyomaಒಂದು ವಾರ ಮೊದಲು ವಯಕ್ತಿಕ ಕೈ-ಯಂತ್ರ ತಂತ್ರಜ್ಞಾನದ ಬಗ್ಗೆ ಬರೆದಾಗ, ರಾಘವೇಂದ್ರನ ಪ್ರತಿಕ್ರಿಯೆಯ ಬಗ್ಗೆ ಚರ್ಚಿಸುತ್ತಿರಬೇಕಾದರೆ, ಜಗತ್ತು ಹಾಗು ಅಮೆರಿಕದಲ್ಲಿನ ಪತ್ರಿಕೋದ್ಯಮದ ಬಗ್ಗೆ ಗಮನ ಹೋಯಿತು.
“In 2009 and 2010, all the two-newspaper markets will become one-newspaper markets, and you will start to see one-newspaper markets become no-newspaper markets,” said Mike Simonton, a senior director at Fitch Ratings, who analyzes the industry. ಮುಂದೆ ಓದಿ.
೨೦೧೦ ರೊಳಗೆ, ಎರಡು ಪತ್ರಿಕೆಗಳಿರುವ ಮಾರುಕಟ್ಟೆಯಲ್ಲಿ ಒಂದು ಪತ್ರಿಕೆ, ಒಂದು ಪತ್ರಿಕೆಯಿರುವ ಮಾರುಕಟ್ಟೆಯಲ್ಲಿ ಪತ್ರಿಕೆಯಿಲ್ಲದ ಪರಿಸ್ತಿಥಿ ಬರುವುದೆಂದು ಮೈಕ್ ಸೈಮನ್ಟನ್, ಫಿಚ್ ರೇಟಿಂಗ್ ನ ಹಿರಿಯ ಅಧಿಕಾರಿ ಹೇಳುತ್ತಾರೆ.
ನಾನು ಅಮೆರಿಕದಲ್ಲಿ ಇದ್ದ ಈ ಎರಡು ವರ್ಷದಲ್ಲಿ ಇದೇನೂ ಆಶ್ಚರ್ಯಕರ ಸಂಗತಿಯಂತೆ ತೋರುವುದಿಲ್ಲ. ಇಲ್ಲಿನ ಇಂಟರ್-ನೆಟ್ ನ ಪ್ರಭಾವದಿಂದಾಗಿ ಎಲ್ಲರೂ ದುಡ್ಡು ಕೊಡದೆ ಸುದ್ದಿ ಹಾಗು ಮಾಹಿತಿ ಪಡೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹಳೆ ಕಾಲದಿಂದ ಪತ್ರಿಕೋದ್ಯಮ ನಡೆಸುತ್ತಾ ಬಂದವರುದ್ದು ಇದಕ್ಕೆ ಹೊಂದಿಕೊಳ್ಳುವುದು ಹೇಗೆಂದು ತೋಚದೆ ಪರದಾಡುವ ಪರಿಸ್ತಿಥಿ. ಆದರೆ ಇಂಟರ್-ನೆಟ್ ಉಪಯೋಗಿಸಿ ಜಾಹೀರಾತು ಆಧರಿತ ಸುಧಿ ಅಥವ ಮಾಹಿತಿ ವಿತರಣೆ ಮಾಡಲು ತಿಳಿದವರು ಈ ಸಾಪ್ರದಾಯಕ ಪತ್ರಿಕೋದ್ಯಮಕ್ಕೆ ಪೈಪೋಟಿ ನೀಡುತ್ತಿದ್ದಾರೆ. ಜನ ಸಾಮಾನ್ಯರು ಬ್ಲಾಗ್ ನಂತಃ ಮಾಧ್ಯಮಗಳನ್ನು ಉಪಯೋಗಿಸುತ್ತಿದ್ದಾರೆ. ಸಾಪ್ರದಾಯಕ ಪತ್ರಿಕೋದ್ಯಮದಂತೆ ದೊಡ್ಡದಾಗಿಯಲ್ಲದಿದ್ದರೂ, ತಕ್ಕಮಟ್ಟಿಗೆ ಸಂಪಾದಿಸುತ್ತಿದ್ದಾರೆ. ಇದರಿಂದಾಗಿ ಪತ್ರಿಕೆಗಳಲ್ಲಿ ಜಾಹೀರಾತು ಖರೀಧಿ ಕಮ್ಮಿ.
ಭಾರತದ ಪರಿಸ್ತಿಥಿ ಹೀಗಿಲ್ಲ.
“I do not see ads generating revenues enough to substantiate a firm. Internet penetration is low in India. Also, more brands need to take up this mode of advertising,” said Rajesh Srivathsa. ಮುಂದೆ ಓದಿ.
ರಾಜೇಶ್ ಶ್ರೀವಥ್ಸ ಹೇಳುವಂತೆ, ಭಾರತದಲ್ಲಿ ಇಂಟರ್-ನೆಟ್ ನ ಪ್ರಭಾವ ಬಹಳ ಕಮ್ಮಿ ಇರುವ ಕಾರಣ, ಜಾಹೀರಾತುಗಳಿಂದ ಒಂದು ಸಂಸ್ಥೆ ನಡೆಸುವಷ್ಟು ಹಣ ಬರುವುದಿಲ್ಲ. ಜಾಹೀರಾತು ಖ್ರರೀಧಿಸುವವರು ಈ ವಿಧಾನವನ್ನು ಇನ್ನೂ ತೆಗೆದುಕೊಂಡಿಲ್ಲ.
ಹೀಗಿರುವಾಗ ಭಾರತದಲ್ಲಿ ಪತ್ರಿಕೋದ್ಯಮ ಇನ್ನೂ ಹಲವು ವರ್ಷ ಜೀವಿತವಿರುವಂತೆ ತೋರುತ್ತದೆ.
Thu
12
Mar
2009
ನಮ್ಮವರ ಪರಿ
by Vyomaಅಬ್ಬಬ್ಬಾ! ಈ ಎರಡು ಘಂಟೆ ಇಂಟರ್-ನೆಟ್ ನಲ್ಲಿ ಕನ್ನಡದಲ್ಲಿ ಬರೆಯುವವರನ್ನು ಹುಡುಕಿದೆ. ಹಲವಾರು ಜನರು ಬರೆಯುವವರಿದ್ದಾರೆ. ಕೆಲವು ಕನ್ನಡಿಗರು ಆಂಗ್ಲದಲ್ಲಿ ಬರೆದರೆ ಮತ್ತೆ ಕೆಲವರು ಕನ್ನಡದಲ್ಲೇ ಬರೆಯುತ್ತಾರೆ. ಬರೆದದ್ದನ್ನು ಓದಿದರೆ ತುಂಬ ಕೆಟ್ಟದೆನಿಸುತ್ತದೆ.
ಕೆಲವು ಕನ್ನಡಿಗರು ಸಿನೆಮಾ, ಗಾಸಿಪ್ ನಂತಃ ವಿಷಯಗಳನ್ನು ಬಿಟ್ಟರೆ ಬೇರೆ ಯೇನೂ ಬರೆದಂತೆ ತೋರುತ್ತಿಲ್ಲ.
ಮತ್ತೆ ಕೆಲವರು ಬರೆದದ್ದನ್ನು ಓದಿದರೆ, ಕನ್ನಡದಲ್ಲಿ ಕನ್ನಡವಲ್ಲದೆ ಬೆರೆ ವಿಷಯಗಳೇ ಇಲ್ಲವೋ ಎಂದು ಯೋಚಿಸಬೇಕು. ಈ ಎರಡನೇ ಪಂಗಡಕ್ಕೆ ಸೇರಿದವರು ಬಹಳ ಒರಟರಂತೆ ತೋರುತ್ತಾರೆ – ಬಾವಿಯೊಳಗಿನ ಕಪ್ಪೆಗಳಂತೆ.
ಕನ್ನಡಲ್ಲಿ ಸಂಪರ್ಕಿಸುವವರು ಜಗತ್ತಿನಲ್ಲಿರುವ ಜನರನ್ನು ನೋಡಿದರೆ ಬಹಳ ಕಮ್ಮಿ. ಆದರೆ ಒಂದು ವಿಷಯ ತೆಗೆದುಕೊಂಡರೆ, ಆ ವಿಷಯದ ಬಗ್ಗೆ ಚರ್ಚೆ ಮಾಡಲು ಹಲವರಿರುತ್ತಾರೆ. ಅವರು ಪರಭಾಷೆಯವರಾಗಿರ ಬಹುದು. ಅವರೆಲ್ಲರೊಂದಿಗೆ ಸಂಪರ್ಕಿಸಲು ಯಾವುದಾದರೂ ಮೂರನೇಯ ಭಾಷೆ ಉಪಯೋಗಿಸ ಬೇಕಾಗುತ್ತದೆ.
ಹೀಗೆ ಹೋದಿಕೊಂಡು ಸಂಗ್ರಹಿಸಿದ ಮಾಹಿತಿಯನ್ನು ಕನ್ನಡದಲ್ಲಿ ಬೇರೆಯವರಿಗೆ ಪುನಃ ಹೇಳಿಯೋ, ಬರೆದೋ ಮಾಡದೆ, ಕನ್ನಡ ಸಾಯುತ್ತಿದೆಯೆಂದು ಬೊಬ್ಬೆ ಹಾಕಿದರೆ ಏನು ಪಯೋಜನ? ಗೊತ್ತಿದೆ – ನಾನು ಈಗ ಹೇಳುತ್ತಿರುವುದು ಇದಕ್ಕೆ ಹೊರತಲ್ಲ.
ನಾನು ಕನ್ನಡದವನಾದರೂ, ಮನೆಯಲ್ಲಿ ಮಾತಾಡುವುದು ಹಳೆಗನ್ನಡಕ್ಕೆ ಹೋಲುವ ಹವ್ಯಕ. ನನ್ನ ಒಂದರಿಂದ ಮೂರನೇ ತರಗತಿ ಮಾಡಿದ್ದು ಪುಣೆಯಲ್ಲಿ. ಹೀಗಾಗಿ ನನ್ನ ಹೆಚ್ಚಿನ ಓದು ಹಾಗು ಅನುಶೋಧನೆ ಆಂಗ್ಲದಲ್ಲೇ ಮಾಡಿದ್ದೇನೆ. ಇರಲಿ – ಮುಂದೆ ಬರುವ ದಿನಗಳಲ್ಲಿ ನಾನೂ ಆ ಎರಡನೇಯ ಪಂಗಡಕ್ಕೆ ಸೇರುತ್ತೇನೆಯೋ ಇಲ್ಲವೋ ಎಂದು ಗೊತ್ತಾಗುವುದು. :)
Wed
11
Mar
2009
ಕನ್ನಡ ಬರೆಯಲು ಗೊಂದಲ
by Vyomaನನ್ನ ಈ ವೆಬ್-ಸೈಟ್ ನಲ್ಲಿ ಕನ್ನಡಕ್ಕೆ ಒಂದು ವಿಭಾಗ ಇಡುವುದೋ ಬೇಡವೋಯೆಂದು ಯೋಚಿಸುತ್ತಿದ್ದೇನೆ. ನ್ನನ ಯೋಚನೆ ಇಂತಃ ಕವಲುದಾರಿಗೆ ಬಂದು ನಿಲ್ಲಲು ಎರಡು ಕಾರಣವಿದೆ.
ಒಂದು – ವಿಷಯಗಳು. ಯಾವ ವಿಷಯಗಳ ಬಗ್ಗೆ ಬರೆಯಲಿ? ನನಗೆ ಹೆಚ್ಚು ತಿಳುವಳಿಕೆ ಹಾಗು ಅಭಿರುಚಿ ಇರುವ ವಿಷಯಗಳು ಕಲೆ ಮತ್ತು ತಂತ್ರಜ್ನಾನ. ಈ ಎರಡು ವಿಷಯಗಳೂ ಕನ್ನಡದಲ್ಲಿ ಬರೆಯಲು ನನಗೆ ಕಠಿಣವೆಂದು ತೋರುತ್ತದೆ.
ಎರಡು – ಓದುಗರು. ಯೇನೋ ಕಷ್ಟ ಪಟ್ಟು ಬರೆದರೇನು ಪ್ರಯೋಜನ? ಓದುವವರಾರು? ಮುಂಚೆ ಹೇಳಿದಂತೆ ಗಣಕ ಯಂತ್ರದಲ್ಲಿ ಕನ್ನಡವೋದಲು ಬಲ್ಲವರು ಬಹಳ ಕಮ್ಮಿ. ಕನ್ನಡದಲ್ಲೇ ಓದುವವರು ಬಹಳ ಕಮ್ಮಿ. ಓದುವವರಿದ್ದರೂ ಅವರ ಬಳಿ ಇಂಟರ್-ನೆಟ್ ಸಂಪರ್ಕವಿಲ್ಲ.
ಅದಲ್ಲದೆ ನನ್ನ ಕನ್ನಡ “ಕೌಶಲ್ಯ” ಅಷ್ಟೇನು ಹೇಳಿಕೊಳ್ಳುವಂತಿಲ್ಲ. ನನ್ನ ತಾಯಿ ನಾನು ಚಿಕ್ಕವನಿರುವಾಗ ಎಷ್ಟು ಬಾರಿ ನನ್ನ ಬರವಣಿಗೆಯನ್ನು ತಿದ್ದಿದ್ದಾರೋ ತಿಳಿಯದು. :P ಈ ಕನ್ನಡ ಬರೆಯುವ “ಚಟ” ಎಷ್ಟು ದಿನ ಇರುತ್ತದೆಂದು ನೋಡಬೇಕಷ್ಟೆ.
Thu
05
Mar
2009
ಕನ್ನಡದಲ್ಲಿ ಬರೆಯುವ ಚಟ
by Vyomaಪ್ರೇರಣೆ ಎಲ್ಲಿಂದ ಬಂತೆಂದು ಗೊತ್ತಿಲ್ಲ ಆದರೆ ಏನೋ ಇವತ್ತು ಕನ್ನಡದಲ್ಲಿ ಬರೆಯುವ ಚಟ ಹತ್ತಿದಂತಿದೆ.
ನನ್ನ ಹವ್ಯಾಸ ವಿಚಾರ ಬಂದಾಗ ನಾನು ಒಂದರಿಂದ ಇನ್ನೊಂದಕ್ಕೆ ಹರುತ್ತಿರುತ್ತೀನೆ. ಇಲ್ಲಿರುವ ಚನ್ನಲ್ ಗಳನ್ನೇ ನೋಡಿ. ಯಾವುದೇ ವಿಚಾರದ ಬಗ್ಗೆ ಗಮನ ಹೋದಂತೆ ಬೇರೆಯವರು ಅದರ ಬಗ್ಗೆ ಯೀನು ಹೇಳುತ್ತಾರೆ ಎಂದು ನೋಡುವ ಹವ್ಯಾಸ ನನ್ನದು. ಗಣಕ ಯಂತ್ರದಲ್ಲಿ ಕನ್ನಡ ಬರೆಯುವುದನ್ನೇಕೆ ಬಿಡಬೇಕು?
ನನ್ನ ಒಂದೇ ಚಿಂತೆ ಏನೆಂದರೆ ಎಲ್ಲರಿಗೂ ತಮ್ಮ ಗಣಕ ಯಂತ್ರವನ್ನು ಕನ್ನಡ ಓದಲು/ಬರೆಯಲು ಸಿದ್ದಪಡಿಸುವುದು ಹೇಗೆಂದು ತಿಳಿದಿರುವುದಿಲ್ಲ. ಬರೀ ಆಂಗ್ಲ ಭಾಷೆ ತೋರಿಸುವ ಸ್ತಿಥಿಯಲ್ಲಿ ಕನ್ನಡವು ಚೌಕಗಳ ಸರಮಾಲೆಯಂತೆ ತೋರುತ್ತದೆ.
PS: Install Kannada Unicode Fonts to read the above entry.
Thu
05
Mar
2009
Writing a blog entry in Kannada ( ಕನ್ನಡ )
by Vyomaದ್ರುಪಾಲಲ್ಲಿ ಕನ್ನಡದಲ್ಲಿ ಬರೆಯಲು ಪ್ರಯತ್ನಿಸುತಿದ್ದೇನೆ. Google ನ indicTransliteration ಉಪಯೋಗಿಸಿ ಈ ಪುಟವನ್ನು ಬರೆದೆ. ಆಮೇಲೆ Ctrl+C/Ctrl+V ಉಪಯೋಗಿಸಿ ದ್ರುಪಾಲ್ ನಲ್ಲಿ ಇರಿಸಿದೆ. ಬಹಳ ದಿನಗಳ ಮೇಲೆ ಕನ್ನಡದಲ್ಲಿ ಬರೆಯುವ ಕಾರಣ ವಿಚಿತ್ರವೆನಿಸುತ್ತಿದೆ.
English translation:
I am trying to write in Kannada in Drupal. Using Google's indicTransliteration, I wrote this page. After that, using Ctrl+C/Ctrl+V I got it into Drupal. Since, after a long time I am writing in Kannada, it feels weird. :)