ಭಾರತದ ಅರ್ಥವ್ಯವಸ್ಥೆಯ ಮೇಲೆ ಟಾಟಾ ನ್ಯಾನೋ ಪರಿಣಾಮ?

Fri

20

Mar

2009

ಆಂಗ್ಲದಲ್ಲಿ ಓದಿ / Read in English

ನನ್ನ ಗೆಳೆಯ ದೀಪಕ್ ರೆಡಿಫ್ ನ ಅಂಕಣ ಕುರಿತು ಬರೆದಿದ್ದಾನೆ - ಟಾಟಾ ನ್ಯಾನೋ ಬಿಡುಗಡೆಯಿಂದಾಗುವ ಪರಿಣಾಮಗಳ ಬಗ್ಗೆ.

ಆ ಅಂಕಣ ಹೇಳುವಂತೆ, ಟಾಟಾ ನ್ಯಾನೋ ಕಾರ್ ಅನ್ನು ಒಂದು ಲಕ್ಷ ರುಪಾಯಿ ಮೌಲ್ಯದಲ್ಲಿ ಮಾರುಕಟ್ಟೆಗೆ ತರುತ್ತಿದೆ.

ಇದರಿಂದಾಗಿ ಭಾರತದಲ್ಲಿ ಮುಂಚೆಗಿಂತ ಬಹಳ ಜನರಿಗೆ ಕಾರೆಂಬುದು ಕೈಗೆಟಕುವ ಸಾಮಾನಾಗುತ್ತದೆ. ದೀಪಕ್ ಹೇಳಿದಂತೆ ಭಾರತದ ಹೆಚ್ಚಿನ ಪಟ್ಟಣಗಳ ರಸ್ತೆ ಸಂಚಾರದ ಮೇಲೆ ಪರಿಣಾಮವಾಗಲಿದೆ. ಆದರೆ, ನನ್ನ ಕುತೂಹಲ ನ್ಯಾನೋ ಆರ್ಥಿಕ ವ್ಯವಸ್ತೆಯ ಮೇಲೆ ಏನು ಪರಿಣಾಮ ಮಾಡುತ್ತದೆಯೆಂದು.

ಅಮೇರಿಕದ ಸಾಲ ಮಾರುಕಟ್ಟೆಯಿಂದ ಶುರುವಾದ ಅಧೋಪತನ ಭಾರತಕ್ಕೆ ಬಿಸಿ ಮುಟ್ಟಿದೆ. ಕಾರಣ ಮಾಹಿತಿ ತಂತ್ರಜ್ಞಾನದಲ್ಲಿ ಭಾರತದ ಒಳಗೋಳ್ಳುವಿಕೆಯಿರಬಹುದು. ಒಂದು ದೇಶದ ಒಂದು ಮಾರುಕಟ್ಟೆಯಲ್ಲಿಯಾದ ಬದಲಾವಣೆಗಳು, ಅದರ ಬೇರೆ ಮಾರುಕಟ್ಟೆಗೆ ಹರಡುತ್ತದೆ.

ಹೆಚ್ಚು ಜನರಿಗೆ ಕಾರು ಕೈಗೆಟಕುವ ಕಾರಣ ಹೊಸ ಮಾರು ಕಟ್ಟೆಯುದ್ಭವಿಸುವ ಸಾಧ್ಯತೆಯಿದೆ. ಒಂದು ಲಕ್ಷ ಪೂರ್ಥಿ ಕೋಡಲಾಗದಿದ್ದರೂ, ಮೊದಲಿಗಿಂತ ಸಣ್ಣ ಮೊತ್ತವಾದ್ದರಿಂದ ಜನರು ಸಾಲ ಮಾಡಿ ಖರೀದಿಸಲುಯತ್ನಿಸುವರು. ಇದು ನನಗೆ ತೋಚುವ ಒಂದು ಪರಿಣಾಮ. ಬಂಡವಾಳದಾರರಿಗೆ ಇದು ಒಳ್ಳೆಯ ಕಾಲದಂತೆ ತೋರುತ್ತದೆ.

ನ್ಯಾನೋ ಬಿಡುಗಡೆ ಒಂದು ಸಣ್ಣ ಭೂಮಿಕೆ ಬೀರಿದರೂ, “ಸರಪಳಿ-ಪರಿಣಾಮ” ಎಶ್ಟರಮಟ್ಟಿಗೆ ಚಕ್ರವನ್ನು ಉಳ್ಟ ತಿರಿಗಿಸುತ್ತದೆಯೆಂದು ನೋಡಬೇಕು.

Trackback URL for this post:

http://kmaheshbhat.com/trackback/238

Post new comment

The content of this field is kept private and will not be shown publicly.