ನಮ್ಮವರ ಪರಿ
Thu
12
Mar
2009
ಅಬ್ಬಬ್ಬಾ! ಈ ಎರಡು ಘಂಟೆ ಇಂಟರ್-ನೆಟ್ ನಲ್ಲಿ ಕನ್ನಡದಲ್ಲಿ ಬರೆಯುವವರನ್ನು ಹುಡುಕಿದೆ. ಹಲವಾರು ಜನರು ಬರೆಯುವವರಿದ್ದಾರೆ. ಕೆಲವು ಕನ್ನಡಿಗರು ಆಂಗ್ಲದಲ್ಲಿ ಬರೆದರೆ ಮತ್ತೆ ಕೆಲವರು ಕನ್ನಡದಲ್ಲೇ ಬರೆಯುತ್ತಾರೆ. ಬರೆದದ್ದನ್ನು ಓದಿದರೆ ತುಂಬ ಕೆಟ್ಟದೆನಿಸುತ್ತದೆ.
ಕೆಲವು ಕನ್ನಡಿಗರು ಸಿನೆಮಾ, ಗಾಸಿಪ್ ನಂತಃ ವಿಷಯಗಳನ್ನು ಬಿಟ್ಟರೆ ಬೇರೆ ಯೇನೂ ಬರೆದಂತೆ ತೋರುತ್ತಿಲ್ಲ.
ಮತ್ತೆ ಕೆಲವರು ಬರೆದದ್ದನ್ನು ಓದಿದರೆ, ಕನ್ನಡದಲ್ಲಿ ಕನ್ನಡವಲ್ಲದೆ ಬೆರೆ ವಿಷಯಗಳೇ ಇಲ್ಲವೋ ಎಂದು ಯೋಚಿಸಬೇಕು. ಈ ಎರಡನೇ ಪಂಗಡಕ್ಕೆ ಸೇರಿದವರು ಬಹಳ ಒರಟರಂತೆ ತೋರುತ್ತಾರೆ – ಬಾವಿಯೊಳಗಿನ ಕಪ್ಪೆಗಳಂತೆ.
ಕನ್ನಡಲ್ಲಿ ಸಂಪರ್ಕಿಸುವವರು ಜಗತ್ತಿನಲ್ಲಿರುವ ಜನರನ್ನು ನೋಡಿದರೆ ಬಹಳ ಕಮ್ಮಿ. ಆದರೆ ಒಂದು ವಿಷಯ ತೆಗೆದುಕೊಂಡರೆ, ಆ ವಿಷಯದ ಬಗ್ಗೆ ಚರ್ಚೆ ಮಾಡಲು ಹಲವರಿರುತ್ತಾರೆ. ಅವರು ಪರಭಾಷೆಯವರಾಗಿರ ಬಹುದು. ಅವರೆಲ್ಲರೊಂದಿಗೆ ಸಂಪರ್ಕಿಸಲು ಯಾವುದಾದರೂ ಮೂರನೇಯ ಭಾಷೆ ಉಪಯೋಗಿಸ ಬೇಕಾಗುತ್ತದೆ.
ಹೀಗೆ ಹೋದಿಕೊಂಡು ಸಂಗ್ರಹಿಸಿದ ಮಾಹಿತಿಯನ್ನು ಕನ್ನಡದಲ್ಲಿ ಬೇರೆಯವರಿಗೆ ಪುನಃ ಹೇಳಿಯೋ, ಬರೆದೋ ಮಾಡದೆ, ಕನ್ನಡ ಸಾಯುತ್ತಿದೆಯೆಂದು ಬೊಬ್ಬೆ ಹಾಕಿದರೆ ಏನು ಪಯೋಜನ? ಗೊತ್ತಿದೆ – ನಾನು ಈಗ ಹೇಳುತ್ತಿರುವುದು ಇದಕ್ಕೆ ಹೊರತಲ್ಲ.
ನಾನು ಕನ್ನಡದವನಾದರೂ, ಮನೆಯಲ್ಲಿ ಮಾತಾಡುವುದು ಹಳೆಗನ್ನಡಕ್ಕೆ ಹೋಲುವ ಹವ್ಯಕ. ನನ್ನ ಒಂದರಿಂದ ಮೂರನೇ ತರಗತಿ ಮಾಡಿದ್ದು ಪುಣೆಯಲ್ಲಿ. ಹೀಗಾಗಿ ನನ್ನ ಹೆಚ್ಚಿನ ಓದು ಹಾಗು ಅನುಶೋಧನೆ ಆಂಗ್ಲದಲ್ಲೇ ಮಾಡಿದ್ದೇನೆ. ಇರಲಿ – ಮುಂದೆ ಬರುವ ದಿನಗಳಲ್ಲಿ ನಾನೂ ಆ ಎರಡನೇಯ ಪಂಗಡಕ್ಕೆ ಸೇರುತ್ತೇನೆಯೋ ಇಲ್ಲವೋ ಎಂದು ಗೊತ್ತಾಗುವುದು. :)
Post new comment