ದ್ರುಪಾಲ್ ಮತ್ತು ಕನ್ನಡ
Thu
21
Jan
2010
ನಿನ್ನೆ ನಾನು ಹೀಗೆ ದ್ರುಪಾಲಲ್ಲಿ ಕನ್ನಡ ಬರೆಯುವುದರ ಬಗ್ಗೆ ಯೋಚಿಸುತ್ತಿರಬೇಕಾದರೆ ಗ್ರಹಣ ಬ್ಲಾಗ್ ನಲ್ಲಿ p6 ಬರೆದ ಎಂಟ್ರಿ ಸಿಕ್ಕಿತು: Help Translate Drupal to Kannada (ದ್ರುಪಾಲನ್ನು ಕನ್ನಡಕ್ಕೆ ಅನುವಾದ ಮಾಡಲು ಸಹಾಯ ಮಾಡಿ)
ದ್ರುಪಾಲ್ ಕೋರ್ ಪ್ರಾಜೆಕ್ಟ್ ನಲ್ಲಿ ೬೦೫೮ ಪದಗಳು ಅನುವಾದ ಮಾಡಲಿಕ್ಕಿದೆ (6058 untranslated words). ಇದರಲ್ಲಿ ಕೆಲವು ಶಬ್ಧಗಳನ್ನು ಈಗಾಗಲೇ ಅನುವಾದ ಮಾಡಿಯಾಗಿದೆ. ಆದರೆ ಇನ್ನೂ ಹಲವು ಶಬ್ದಗಳು ಬಾಕಿಯಗಿವೆ.
ದ್ರುಪಾಲಲ್ಲಿ ಈಗಾಗಲೇ ನಾನು ಬಹಳ ತೊಡಗಿಕೊಂಡಿರುವ ಕಾರಣ ನನ್ನ ಅಳಿಲು ಕಾಣಿಕೆ ನೀಡಲು ಪ್ರಾರಂಭಿಸಿದ್ದೇನೆ. ನೀವೂ, ಕನ್ನಡ ಹಾಗು ಆಂಗ್ಲ ಬಲ್ಲವರಾದರೆ, ಕನ್ನಡ ಗ್ರೂಪ್ ಸೇರಿಕೊಂಡು ಆಂಗ್ಲ ಶಬ್ದಗಳಿಗೆ ಕನ್ನಡ ಶಬ್ದವನ್ನು ಸೂಚಿಸಿ. ಇದರಿಂದಾಗಿ ಕನ್ನಡದಲ್ಲಿ ವೆಬ್ಸೈಟ್ ತಯಾರು ಮಾಡುವುದು ಸರಳವಾಗುವುದು. ಹೀಗಾದಲ್ಲಿ, ಇಂಟರ್ನೆಟ್ ನಲ್ಲಿ ಕನ್ನಡದ ಬಳಕೆ ಹೆಚ್ಚುವುದು ಹಾಗು ಹಲವು ವಿಷಯಗಳು ನಮ್ಮ ಕನ್ನಡ ಮಿತ್ರರಿಗೆ ಓದಲು ದೊರೆಯುವುದು. ನಿಮಗೆ ಈ ಕುರಿತು ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯದಿರಿ. ನೀವು ಇಲ್ಲಿಯೂ ಪ್ರಶ್ನೆ ಕೇಳಬಹುದು.
Post new comment